ಭೂಮಿ ಹಕ್ಕು — ಕರ್ನಾಟಕದ ಭೂ ಹಕ್ಕುಗಳ ಡಿಜಿಟಲ್ ವೇದಿಕೆ
ರೈತರ ಭೂಮಿ ರೈತರ ಹಕ್ಕು ರೈತರಿಗೆ ನ್ಯಾಯ

ಭೂಮಿ ಎಂದರೆ ಕೇವಲ
ಒಂದು ಸರ್ವೆ ನಂಬರ್ ಅಲ್ಲ.

ಅದು ಒಬ್ಬ ರೈತನ ಅಪ್ಪ-ಅಜ್ಜನ ಬೆವರಿನ ಫಲ. ಮಗಳ ಮದುವೆಗೆ ಆಸರೆ. ಮಗನ ಓದಿಗೆ ದಾರಿ. ಮುಪ್ಪಿನ ಕಾಲದ ಭರವಸೆ. ಒಂದೇ ಒಂದು ಗೆಜೆಟ್ ನೋಟಿಫಿಕೇಶನ್ ಆ ಭರವಸೆಯನ್ನೆಲ್ಲ ಪ್ರಶ್ನಾರ್ಥಕ ಚಿಹ್ನೆಯಾಗಿ ಬದಲಿಸಬಹುದು.

ಈಗಲೇ ನೋಂದಣಿ ಮಾಡಿ ಉಚಿತ ಕಾನೂನು ಸಲಹೆ
ಮಾಹಿತಿ
INFORMATION
ಹಕ್ಕುಗಳು
RIGHTS
ಕಾನೂನು ನೆರವು
LEGAL HELP
ನ್ಯಾಯ
JUSTICE
ಏಕೆ boomihakku.org?

ಅಭಿವೃದ್ಧಿ ಮತ್ತು ನ್ಯಾಯ —
ಇವೆರಡೂ ಒಂದೇ ದಾರಿಯಲ್ಲಿ ಸಾಗಬೇಕು.

ಕರ್ನಾಟಕದ ಉದ್ದಗಲಕ್ಕೂ, ಕೈಗಾರಿಕಾ ಕಾರಿಡಾರ್, ಮೆಟ್ರೋ, ವಿಮಾನ ನಿಲ್ದಾಣ, ಟೌನ್‌ಶಿಪ್, ರಸ್ತೆ, ರೈಲ್ವೆ ಯೋಜನೆಗಳ ಹೆಸರಿನಲ್ಲಿ ಭೂಸ್ವಾಧೀನ ನಡೆಯುತ್ತಲೇ ಇದೆ. ಅಭಿವೃದ್ಧಿ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆ ಅಭಿವೃದ್ಧಿಯ ಬುಡದಲ್ಲಿ ಒಬ್ಬ ರೈತ ಕಣ್ಣೀರಿಡಬಾರದು ಎಂಬುದು ಕೂಡ ಅಷ್ಟೇ ನಿಜ.

ಇದು ಕೇವಲ ಒಂದು ವೆಬ್‌ಸೈಟ್ ಅಲ್ಲ — ಇದು ಕರ್ನಾಟಕದ ಪ್ರತಿಯೊಬ್ಬ ರೈತನ ಭೂಮಿ ಸಂಬಂಧಿತ ಹಕ್ಕುಗಳಿಗೆ ಒಂದು ಡಿಜಿಟಲ್ ದನಿ. ಮಾಹಿತಿ, ಕಾನೂನು ನೆರವು, ಸಂಶೋಧನೆ, ದಾಖಲೆ ಮತ್ತು ಪಾರದರ್ಶಕತೆ — ಎಲ್ಲವೂ ಒಂದೇ ವೇದಿಕೆಯಡಿ.

ಈ ವೇದಿಕೆ ಯಾರ ವಿರುದ್ಧವೂ ಅಲ್ಲ — ಇದು ಸತ್ಯದ ಪರ, ಪಾರದರ್ಶಕತೆಯ ಪರ.
ಭೂಮಿ ಹಕ್ಕು ಲೋಗೋ
ನಮ್ಮ ಬಗ್ಗೆ · ABOUT US

ಈ ಚಳುವಳಿ ಆರಂಭವಾಗಿದ್ದು ಕೋಪದಿಂದಲ್ಲ, ಕಾಳಜಿಯಿಂದ.

ನಾವು ಯಾರು ಎಂಬ ಪ್ರಶ್ನೆಗೆ ಉತ್ತರ ಸರಳ. ನಾವು ವಕೀಲರು, ಪತ್ರಕರ್ತರು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ರೈತ ಕುಟುಂಬಗಳ ಒಂದು ಸಮೂಹ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆಗುತ್ತಿರುವ ಗೊಂದಲ, ಮಾಹಿತಿ ಕೊರತೆ ಮತ್ತು ಕೆಲವೊಮ್ಮೆ ಆಗುವ ಅನ್ಯಾಯದ ಆರೋಪಗಳನ್ನು ವರ್ಷಗಳಿಂದ ಗಮನಿಸುತ್ತ ಬಂದವರು.

ನಮ್ಮ ಗುರಿ ಯಾವುದೇ ಯೋಜನೆಯನ್ನು ವಿರೋಧಿಸುವುದಲ್ಲ. ಪ್ರತಿ ಯೋಜನೆಯೂ ಕಾನೂನಿನ ಚೌಕಟ್ಟಿನೊಳಗೆ, ಸಂವಿಧಾನದ ಆಶಯದಂತೆ, ರೈತನ ಘನತೆಗೆ ಧಕ್ಕೆಯಾಗದಂತೆ ನಡೆಯಬೇಕು ಎಂಬುದು.

✕ ಅಭಿವೃದ್ಧಿ ವಿರೋಧಿ ಅಲ್ಲ
✓ ಅನ್ಯಾಯ ವಿರೋಧಿ
ನಮ್ಮ ಧ್ಯೇಯ · MISSION

ಪ್ರತಿಯೊಬ್ಬ ರೈತನಿಗೆ ತಲುಪಬೇಕಾದ ಆರು ಅಂಶಗಳು

ಇಂದು ಒಬ್ಬ ರೈತ ತನ್ನ ಭೂಮಿ ಸ್ವಾಧೀನ ಪ್ರಕ್ರಿಯೆಯ ಯಾವ ಹಂತದಲ್ಲಿದೆ ಎಂದು ತಿಳಿಯಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಸ್ಥಿತಿ ಇದೆ. ಇದನ್ನು ಬದಲಿಸುವುದೇ ನಮ್ಮ ಧ್ಯೇಯ.

ನಮ್ಮ ದೃಷ್ಟಿ · VISION 2035
2035

ಕರ್ನಾಟಕದ ಪ್ರತಿಯೊಂದು ಭೂಸ್ವಾಧೀನ ಪ್ರಕರಣವೂ ಸಾರ್ವಜನಿಕ ಡಿಜಿಟಲ್ ದಾಖಲೆಯಾಗಿ ಲಭ್ಯವಿರಬೇಕು — ಇದು ನಮ್ಮ ಕನಸು.

ಯಾವ ರೈತನಿಗೂ, "ನನಗೆ ಗೊತ್ತಿರಲಿಲ್ಲ" ಎಂಬ ಕಾರಣಕ್ಕೆ ಹಕ್ಕು ಕಳೆದುಕೊಳ್ಳುವ ಸ್ಥಿತಿ ಬರಬಾರದು.

ರೈತರ ನೋಂದಣಿ · FARMER REGISTRATION

ನಿಮ್ಮ ಭೂಮಿ ಸ್ವಾಧೀನ ಪ್ರಕ್ರಿಯೆಯ ಅಡಿಯಲ್ಲಿ ಬಂದಿದೆಯೇ?

ಗೆಜೆಟ್ ನೋಟಿಫಿಕೇಶನ್ ಬಂದಿದೆಯೇ? ಇಲ್ಲಿ ನೋಂದಣಿ ಮಾಡಿಕೊಳ್ಳಿ. ನಿಮ್ಮ ಒಂದು ನೋಂದಣಿ ಕೇವಲ ಒಂದು ಫಾರ್ಮ್ ಅಲ್ಲ — ಅದು ನಿಮ್ಮ ಪ್ರಕರಣಕ್ಕೆ ಕಾನೂನು ಬೆಂಬಲ ಸಿಗುವ ಮೊದಲ ಹೆಜ್ಜೆ.

🔒 ನಿಮ್ಮ ಮಾಹಿತಿ ಸುರಕ್ಷಿತ — ಎಲ್ಲಾ ವಿವರಗಳು ಭದ್ರವಾಗಿ ಸಂಗ್ರಹ
🤝 ನಿಮ್ಮ ಪ್ರಕರಣದ ವಿವರ ಗೌಪ್ಯ — ಮೂರನೇ ವ್ಯಕ್ತಿಗೆ ಹಂಚಿಕೆ ಇಲ್ಲ
📣 ನಿಮ್ಮ ಹಕ್ಕು ಸಾರ್ವಜನಿಕ — ನ್ಯಾಯದ ದನಿ ಜೋರಾಗುತ್ತದೆ
ನೋಂದಣಿ ಫಾರ್ಮ್
ಪ್ರತಿ ರೈತ ಸ್ವತಃ ವಿವರ ದಾಖಲಿಸಬಹುದು · * ಇರುವ ಕ್ಷೇತ್ರಗಳು ಕಡ್ಡಾಯ
ಸಾರ್ವಜನಿಕ ನೋಂದಣಿ ಪಟ್ಟಿ · PUBLIC REGISTRY

ನೋಂದಾಯಿತ ರೈತರ ಪ್ರಕರಣಗಳು

ನಿಮ್ಮ ವೈಯಕ್ತಿಕ ವಿವರ ಗೌಪ್ಯ (**** ಮರೆಮಾಚಲಾಗಿದೆ) — ಆದರೆ ನಿಮ್ಮ ಹಕ್ಕು ಸಾರ್ವಜನಿಕ.

ರೈತರ ಹೆಸರುಜಿಲ್ಲೆ / ಗ್ರಾಮಸ್ವಾಧೀನ ಸಂಸ್ಥೆಯೋಜನೆಯ ಬಗ್ಗೆ ನಿಲುವುವಿವರ
🔒 ಹೆಸರು ಮತ್ತು ಮೊಬೈಲ್ ಸಂಖ್ಯೆಯ ಭಾಗಗಳನ್ನು ಗೌಪ್ಯತೆಗಾಗಿ **** ಮೂಲಕ ಮರೆಮಾಡಲಾಗಿದೆ.
ಸಂಶೋಧನಾ ವಿಭಾಗ · RESEARCH WING

ಭಾರತದ ಮುಂಚೂಣಿಯ ರೈತರ ಭೂ ಹಕ್ಕು ಸಂಶೋಧನಾ ಕೇಂದ್ರ — ಇದು ನಮ್ಮ ಕನಸು.

ಭಾರತದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಮಾಹಿತಿ ಎಲ್ಲೋ ಒಂದು ಕಡೆ ಕುಳಿತು ಸಿಗುವಂತಿಲ್ಲ. ಇದನ್ನು ಒಂದೇ ಸೂರಿನಡಿ ತರುವ ಗುರಿಯೊಂದಿಗೆ ಈ ವಿಭಾಗವನ್ನು ಕಟ್ಟುತ್ತಿದ್ದೇವೆ — ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ, ವಕೀಲರಿಗೆ ಉಪಯುಕ್ತವಾಗುವಂತೆ.

ಸ್ವಯಂಸೇವಕರಾಗಿ · VOLUNTEER

ಈ ಚಳುವಳಿ ಒಬ್ಬರಿಂದ ಕಟ್ಟಲಾಗುವುದಿಲ್ಲ.

ನಿಮ್ಮೆಲ್ಲರ ಅನುಭವವೇ ಈ ಚಳುವಳಿಯ ಬೆನ್ನೆಲುಬು. ನಿಮ್ಮ ಸಮಯ ನೀಡಿ, ನಮ್ಮ ಜೊತೆಗೆ ಸೇರಿ.

ಸಂಸ್ಥಾಪಕರ ಮಾತು · FOUNDER MESSAGE

ಈ Portal ಹುಟ್ಟಿದ್ದು ಒಂದೇ ದಿನದಲ್ಲಿ ಅಲ್ಲ. ಎರಡು ದಶಕಗಳ ಕಾನೂನು ಅಭ್ಯಾಸದ ಅವಧಿಯಲ್ಲಿ, ಎಷ್ಟೋ ಬಾರಿ ರೈತರು ನನ್ನ ಬಳಿ ಬಂದು, "ಸಾರ್, ನನ್ನ ಭೂಮಿ ಹೋಗುತ್ತಿದೆ, ಏನು ಮಾಡಬೇಕು ಗೊತ್ತಾಗುತ್ತಿಲ್ಲ" ಎಂದು ಕೇಳಿದ್ದನ್ನು ಕೇಳಿದ್ದೇನೆ. ಮಾಹಿತಿಯೇ ಶಕ್ತಿ, ಮತ್ತು ಆ ಶಕ್ತಿ ಸಾಮಾನ್ಯ ರೈತನ ಕೈಗೂ ತಲುಪಬೇಕು ಎಂಬ ನಂಬಿಕೆಯಿಂದ boomihakku.org ಹುಟ್ಟಿದೆ.

ಇದು ಪರಿಪೂರ್ಣವಲ್ಲ, ಆದರೆ ಪ್ರಾಮಾಣಿಕ.